ಎಲ್ಲರಿಗೂ ಒಂದೇ ನ್ಯಾಯ, ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ! ರಿಯಾಝ್, 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದಾಗ... ಅಡುಗೆ ಮನೆಯ ಜವಾಬ್ದಾರಿಯನ್ನ ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿಗೆ ವಹಿಸಿದ್ದರು. ಆಗ, ''ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಅವತ್ತಿನ ದಿನದ ಪಾತ್ರೆಗಳನ್ನ ಅವತ್ತಿನ ದಿನವೇ ತೊಳೆಯುತ್ತಿಲ್ಲ'' ಎಂದು ಸೆಲೆಬ್ರಿಟಿ ಸ್ಪರ್ಧಿಗಳು ದೂರಿದ್ದರು. ನಂತರ ಚಂದನ್ ಶೆಟ್ಟಿ ಕ್ಯಾಪ್ಟನ್ ಆದ್ಮೇಲೆ, ಅಡುಗೆ ಮನೆಯ ಸುಪರ್ದಿಯನ್ನ ಸಿಹಿ ಕಹಿ ಚಂದ್ರುಗೆ ವಹಿಸಿದರು. ಆಗಲೂ, ಅವತ್ತಿನ ದಿನದ ಪಾತ್ರೆಗಳನ್ನ ಅವತ್ತೇ ತೊಳಿಯುತ್ತಿರಲಿಲ್ಲ. ''ಸ್ವಚ್ಛತೆ ಬಗ್ಗೆ ಬೆಟ್ಟು ಮಾಡಿ ತೋರಿಸಿದವರು ಮಾಡುತ್ತಿರುವುದು ಸರಿಯೇ.?'' ಎಂಬುದನ್ನು ಚಂದನ್ ಶೆಟ್ಟಿ ಹಾಗೂ ದಿವಾಕರ್ ಕ್ಯಾಮರಾ ಮುಂದೆ ಕೇಳಿದರು. ಈ ಟಾಪಿಕ್ ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತೆಗೆದರು.